ಮಾಗಡಿ,ಜೂನ್.21- ನೆನ್ನೆ ಸಂಪ್ರೀತಿ ಸಮೃದ್ಧಿ ಮಾಸಪತ್ರಿಕೆಯ ಶಿ 6ನೇ ವರ್ಷದ ವಾರ್ಷಿಕೋತ್ಸವ ಇಲ್ಲಿನ ಡಾಕ್ಟರ್ ಬಿ.ಆರ್.ಅಂಜೇ ಡ್ಕರ್ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪ್ರೀತಿ ! ಸಮೃದ್ಧಿ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಾಗೂ ಮುಖ್ಯಮಂತ್ರಿಗಳ ಕೌತಲ್ಯ ಕರ್ನಾಟಕ ಅಭಿವೃದ್ಧಿ ಯೋಜನೆಯಲ್ಲಿ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಮಾರಂಭವನ್ನು ಶಾಸಕರಾದ ಎಚ್.ಸಿ.ಬಾಲಕೃಷ್ಣ ರವರು ಉದ್ಭಾಟಿಸಿದರು. ಹಿ೦ದೂ ಪತ್ರಿಕೆಯ ವರದಿಗಾರ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಪಿ.ರಾಮಯ್ಯನವರು ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಜಿಲ್ಲಾ ಕೌತಲ್ಯಾಧಿಕಾರಿ ಉಮೇಶ್ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಈ ಕಾರ್ಯಕ್ರಮಕ್ಕೆ ವಿಶೇಷ ಅಹ್ಹಾನಿತರಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯಾಧ್ಯಕ್ಷ! ರಾಗಿ ಶಿವಾನಂದ ತಗಡೂರು ಆಗಮಿಸಿದ್ದರು. ಸಂಪ್ರೀತಿ ಸಮೃದ್ಧಿ ಸಾಹಿತ್ಯ ಪ್ರಶಸ್ತಿಯನ್ನು ಚಿತ್ರ ಪ್ರತಿಭೆ ಕೃತಿಗಾಗಿ ಬೆಳಗಾವಿಯ ಶ್ರೀಮತಿ ಡಾಕ್ಟರ್ ಗುರುದೇವಿ ಉಲ್ಲಪ್ಪನವರ ಮಠ ಇವರಿಗೆ ನೀಡಲಾಯಿತು. ಸಮಕ್ಷಮ ಕೃತಿಗೆ ತುರುವೇಕೆರೆಯ ಎಲ್.ಎನ್.ಪ್ರಸಾದ್ ರವರಿಗೆ ಹಾಗೂ ಯುವಜನತೆಗೆ ಸ್ಪೂರ್ತಿ ಕೃತಿಗೆ ತುಮಕೂರಿನ ಬಾಲಚಂದ್ರ ರವರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ರಾದ ತಿ.ನಾ.ಪದ್ಮ ನಾಭ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ: ರಾದ ಟಿ.ಕೆ.ರಾಮು, ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಿ.ಜಿ. ಗಂಗಾಧರ್ ಹಾಗೂ ಶಿಕ್ಷ! ಕರಾದ ಮುನಿಯಪ್ಪನವರು ಭಾಗವಹಿಸಿ ದ್ದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಪ್ರೀತಿ ಸಮೃದ್ಧಿ ಮಾಸಪತ್ರಿಕೆಯ ಸಂಪಾದಕರಾದ ಡಾಕ್ಟರ್ ಸಿ.ನಂಜು೦ಡಯ್ಯನವರು ವಹಿಸಿದ್ದರು. ಡಾಕ್ಟರ್ ಡಿ.ಸಿ.ರಾಮಚಂದ್ರ ರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.