ಮಾಗಡಿ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಭೇಟಿ ನೀಡಿದ ಆಯುಕ್ತರು

ಕರ್ನಾಟಕ ಸರಕಾರದ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರಾದ ಡಾ. ಎಮ್.ವಿ.ವೆಂಕಟೇಶ್ರವರು, ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಪನ್ಮೂಲ ಸಂಸ್ಥೆಯ ಕೇಂದ್ರ ಕಚೇರಿ ಮತ್ತು ಅಮೃತ FPO ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಂಪ್ಯೂಟರ್ ಲ್ಯಾಬ್, ಹೊಲಿಗೆ ತರಬೇತಿ ಕೇಂದ್ರ ಹಾಗೂ ಬ್ಯೂಟಿ ಪಾರ್ಲರ್ ತರಬೇತಿ ಕೇಂದ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಆಯುಕ್ತರ ಭೇಟಿ ವೇಳೆ ಕೃಷಿ ಇಲಾಖೆ, ಜಂಟಿ ನಿರ್ದೇಶಕರಾದ ಸೋಮ ಸುಂದರ್ ಮತ್ತು ಕೌಶಲ್ಯಾಭಿವೃದ್ಧಿ ನಿರ್ದೇಶಕರಾದ ಉಮೇಶ್ ಹಾಜರಿದ್ದರು. ಈ ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕರಾದ ನರಸಿಂಹಯ್ಯ, ಸಂಸ್ಥೆಯ ಅಧ್ಯಕ್ಷರಾದಡಾ. ಡಿ.ಸಿ.ರಾಮ ಚಂದ್ರರವರು ಹಾಗೂ ಶಿಕ್ಷಕರಾದ ಮುನಿಯಪ್ಪರವರು, ಡಿ.ಜಿ.ಗಂಗಾಧರ್ರವರು ಹಾಗೂ ಸಿಬ್ಬಂದಿ ವರ್ಗದವರುಉಪಸ್ಥಿತರಿದ್ದರು.
ಪುರಸಭೆಯ ಮುಖ್ಯಾಧಿಕಾರಿ ಭಾರತಿ ಮಾತನಾಡಿ ಸ್ವಾವಲಂಬಿಗಳಾಗಿ ಬದುಕುಕಟ್ಟಿಕೊಂಡವರುಇAದು ಸರಕಾರಿ ನೌಕರರಿಗಿಂತಲೂಅಧಿಕ ಸಂಪಾದನೆ ಮಾಡುತ್ತಿದ್ದಾರೆ. ಹೀಗಾಗಿ ಕೌಶಲ್ಯಾರ್ಥಿಗಳು ಕಿನ್ನತೆಗೊಳಗಾಗದೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸರಕಾರದ ಸರ್ವಸಹಕಾರವನ್ನು ಪಡೆದುಕೊಳ್ಳಿ ಎಂದರು.