ಕನ್ನಡ ರಾಜ್ಯೋತ್ಸವ ಸಮಾರಂಭ

ದಿನಾಂಕ:01.11.2025 ರಂದು ಮಾಗಡಿಯ ಕೊಟೆ ಮೈದಾನದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಲೇಖಕರಾದ ಡಾ.ಡಿ.ಸಿ.ರಾಮಚಂದ್ರರವರು ಬರೆದಿರುವ ಯಶಸ್ವಿ ತಿರುವು ಕೃತಿಯನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದಂತಹ ಸನ್ಮಾನ್ಯ ಶಾಸಕರಾದ ಡಾ.ಹೆಚ್.ಸಿ.ಬಾಲಕೃಷ್ಣರವರು ಹಾಗೂ ಮಾಗಡಿ ತಾಲ್ಲೂಕು ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಶ್ರೀ ಡಿ.ಪಿ.ಶರತ್ ಕುಮಾರ್ ರವರು ಯಶಸ್ವಿ ತಿರುವು ಕೃತಿಯನ್ನು ಲೋಕಾರ್ಪಣೆ ಮಾಡಿದರು. ಈ ಸಮಾರಂಭದಲ್ಲಿ ಇನ್ನೂ ಹಲವಾರು ಗಣ್ಯವ್ಯಕ್ತಿಗಳು ಭಾಗವಹಿಸಿದರು. ಕೃತಿಯನ್ನು ಕುರಿತು ಕ.ಸಾ.ಪ. ಅಧ್ಯಕ್ಷರಾದ ತಿ.ನಾ.ಪದ್ಮನಾಭರವರು ಮಾತನಾಡಿದರು.