ಸಮೃದ್ಧ ಸಂಪದ( ಮೌಲ್ಯಾಧಾರಿತ ನೀತಿ ಕಥೆಗಳ) ಪುಸ್ತಕ ಲೋಕಾರ್ಪಣೆ

ದದಿನಾಂಕ:21.12.2025ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾಕ್ಟರ್ ಪುರುಷೋತ್ತಮ ಬಿಳಿಮಲೆ ಅವರು ಡಾಕ್ಟರ್ ಡಿಸಿ ರಾಮಚಂದ್ರರವರ ಸಮೃದ್ಧ ಸಂಪದ ಮೌಲ್ಯಾಧಾರಿತ ಕಥೆಗಳ ಪುಸ್ತಕವನ್ನು ಅನಾವರಣಗೊಳಿಸಿದರು. ಈ ಕಾರ್ಯಕ್ರಮವನ್ನು ಸುಧಾ ವಾರಪತ್ರಿಕೆಯ ಮುಖ್ಯಸ್ಥೆ ಡಾ. ರಶ್ಮಿ ಎಸ್ ರವರು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ನಿಡಸಾಲೆ ಪುಟ್ಟಸ್ವಾಮಯ್ಯ ನವರು ಭಾಗವಹಿಸಿದ್ದರು. ಡಾಕ್ಟರ್ ಡಿಸಿ ರಾಮಚಂದ್ರರವರು ಲೇಖಕರ ನುಡಿಗಳ ನಾಡಿದರೆ, ಡಾಕ್ಟರ್ ಸಿ ನಂಜುಂಡಯ್ಯನವರು ಅಧ್ಯಕ್ಷೀಯ ಭಾಷಣ ಮಾಡಿದರು. ಖ್ಯಾತ ಗಾಯಕ್ಕೆ ಶಮಿತಾ ಮಲ್ನಾಡ್ ರವರು ಸುಮಧುರವಾಗಿ ಪ್ರಾರ್ಥಿಸಿದರು. ಶಿಕ್ಷಕ ಡಿಸಿ ಗಂಗಾಧರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.