ದುಡಿಯುವ ಕೈಗಳಿಗೆ ಕೌಶಲ ಮತ್ತು ಕೌಶಲಕ್ಕೆ ಪೂರಕವಾದ ಯಾಂತ್ರಿಕ ಪರಿಕರ ಮತ್ತು ಆರ್ಥಿಕ ಸಹಾಯ ಮಾಡಿದ್ದೆ ಆದರೆ ಬಡತನ ನಿರ್ಮೂಲನೆಯದಾಗಿ ಮಹಿಳೆ ಆರ್ಥಿಕವಾಗಿ ಸದೃಢವಾಗುವ ಮಟ್ಟಿಗೆ ಬೆಳೆಯುತ್ತಾರೆ ಎಂದು ರಾಜ್ಯ ಸಹಕಾರ ಒಕ್ಕೂಟದ ನಿರ್ದೇಶಕ ಅಶೋಕ್ ತಿಳಿಸಿದರು. ಮಾಗಡಿ ತಾಲೂಕಿನ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೌಶಲ ಕೇಂದ್ರದಲ್ಲಿ ಟೈಲರಿಂಗ್ ತರಬೇತಿ ಪಡೆದ 60 ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ಯಂತ್ರಗಳನ್ನು ನೀಡಿ ಅವರು ಮಾತನಾಡಿದರು. ಮಾಗಡಿ ತಾಲೂಕಿನಲ್ಲಿ ಹೆಚ್ಚಿನ ಕೌಶಲ ತರಬೇತಿಗಳು ನಡೆಯಬೇಕು ತರಬೇತಿಯನ್ನು ಪಡೆದು ಕೈಕಟ್ಟಿ ಕೂರದೆ ತಾವು ಕಲಿತ ವಿದ್ಯೆಯನ್ನು ಬಳಸಿಕೊಂಡು ಆರ್ಥಿಕವಾಗಿ ಬಲವರ್ಧನೆ ಯಾಗಬೇಕು ಆಗ ಮಾತ್ರ ಮಹಿಳೆಯರು ಸಾಧನೆಯ ಉತ್ತುಂಗಕ್ಕೆ ಏರುತ್ತಾರೆ ಎಂದರು. ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ ಧನಂಜಯ ಮಾತನಾಡಿ ಮಾಗಡಿ ತಾಲೂಕಿನಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಕೌಶಲವನ್ನು ನೀಡುವ ಕೆಲಸವನ್ನು ಸಮೃದ್ಧ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡುತ್ತಿರುವುದು ಈ ಭಾಗಕ್ಕೆ ಸಿಂಹ ಪಾಲು ಅನುಕೂಲಕರವಾಗುತ್ತಿದೆ ಹೀಗಾಗಿ ಸರಕಾರವು ಫಲಾನುಭವಿಗಳನ್ನು ಗುರುತಿಸಿ ತರಬೇತಿದಾರರಿಗೆ ಯಂತ್ರಗಳನ್ನು ವಿತರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರ ಮಾತನಾಡಿ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಮತ್ತು ಗ್ರಾಮೋದ್ಯೋಗ ಯೋಜನೆ ಅಡಿಯಲ್ಲಿ ಅರವತ್ತು ಮಹಿಳೆಯರಿಗೆ ತರಬೇತಿಯನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದೇವೆ ಹೀಗಾಗಿ ಸರ್ಕಾರ ಅವರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದೆ ಇದು ಯುವತಿಯರ ಹಾಗೂ ಮಹಿಳೆಯರ ಆರ್ಥಿಕ ಫಲವರ್ಧನೆಗೆ ಸಹಕಾರಿ ಎಂದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಕೈಗಾರಿಕಾ ಇಲಾಖೆ ವತಿಯಿಂದ ವಿಶ್ವಕರ್ಮ ಕುಟುಂಬದವರಿಗೆ ಹಾಗೂ ಭಜಂತ್ರಿಗಳ ಕುಟುಂಬಗಳಿಗೆ, ಕಟ್ಟಡ ಕಾರ್ಮಿಕರಿಗೆ ಸಲಕರಣೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಡಾ. ನಂಜುಂಡಯ್ಯ, ಕಾರ್ಮಿಕ ಹಾಗೂ ಗ್ರಾಮೋದ್ಯೋಗ ಇಲಾಖೆಯ ಉಪ ನಿರ್ದೇಶಕ ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುರೇಂದ್ರ, ಮಾಗಡಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ತಿ.ನಾ ಪದ್ಮನಾಭ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರಾಜು, ಉಪನ್ಯಾಸಕಿ ಲೀಲಾವತಿ, ಸರಸ್ವತಿ ಮಾಗಡಿ ತಾಲೂಕಿನ ವಿವಿಧ ಹೋಬಳಿಗಳಿಂದ ಸಮೃದ್ಧಿ ಗ್ರಾಮಿನ ಅಭಿವೃದ್ಧಿ ಸಂಸ್ಥೆಯಲ್ಲಿ ತರಬೇತಿ ಪಡೆದ 60 ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.